HomeEducation › ಮಹಿಳಾ ಶಿಕ್ಷಕರ ಅಸ್ಮಿತೆ ಮತ್ತು ವೃತ್ತಿಪರ ಬೆಳವಣಿಗೆಯಲ್ಲಿ ಮಹಿಳಾ ಶಿಕ್ಷಕರ ವೇದಿಕೆಯ ಪಾತ್ರ

Cover of ಮಹಿಳಾ ಶಿಕ್ಷಕರ ಅಸ್ಮಿತೆ ಮತ್ತು ವೃತ್ತಿಪರ ಬೆಳವಣಿಗೆಯಲ್ಲಿ ಮಹಿಳಾ ಶಿಕ್ಷಕರ ವೇದಿಕೆಯ ಪಾತ್ರ

ಮಹಿಳಾ ಶಿಕ್ಷಕರ ಅಸ್ಮಿತೆ ಮತ್ತು ವೃತ್ತಿಪರ ಬೆಳವಣಿಗೆಯಲ್ಲಿ ಮಹಿಳಾ ಶಿಕ್ಷಕರ ವೇದಿಕೆಯ ಪಾತ್ರ

ಮೊಗೇರ್‌, ಗುರು

FormatEbook
LanguageKannada
ReadingIncluded
Full text being prepared Keep a copy ₹9
About this book
ಸೇವಾನಿರತ ಶಿಕ್ಷಕರ ಒಟ್ಟು ಪ್ರಮಾಣದಲ್ಲಿ ಶೇ.40ರಿಂದ 50ರಷ್ಟು ಮಹಿಳಾ ಶಿಕ್ಷಕರಿದ್ದರೂ ಸ್ವಯಂ ಪ್ರೇರಿತ ವೃತ್ತಿಪರ ಬೆಳವಣಿಗೆಯ ಚಟುವಟಿಕೆಗಳಲ್ಲಿ ಇವರ ಭಾಗವಹಿಸುವಿಕೆಗೆ ಕೌಟುಂಬಿಕ ಮತ್ತು ಇತರ ಸಾಮಾಜಿಕ ಕಾರಣಗಳು ತಡೆಯೊಡ್ಡುತ್ತವೆ. ಇಂದಿಗೂ ರಾಜ್ಯದ ಕೆಲವೆಡೆ ಹೆಣ್ಣುಮಕ್ಕಳ ಬಾಲ್ಯವಿವಾಹ ಮತ್ತು ಪ್ರೌಢಶಾಲಾ ಹಂತದಲ್ಲಿ ಶಾಲೆಯಿಂದ ಹೆಣ್ಣುಮಕ್ಕಳು ಹೊರಗುಳಿಯಬೇಕಾದ ಸಂಪ್ರದಾಯಬದ್ಧ ಆಚರಣೆಗಳು ರೂಢಿಯಲ್ಲಿವೆ. ಇಂತಹ ಸಾಮಾಜಿಕ ಪರಿಸರದಲ್ಲೂ ಮಹಿಳೆಯರ ವೃತ್ತಿಪರ ಬೆಳವಣಿಗೆಗೆಂದೇ ವಿಶೇಷವಾಗಿ ರೂಪಿಸಲಾದ ಮಹಿಳಾ ಶಿಕ್ಷಕರ ವೇದಿಕೆಗಳು ಮಹಿಳಾ ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಒತ್ತಾಸೆಯನ್ನು ನೀಡುತ್ತಿರುವುದಲ್ಲದೆ ಅವರ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ನೆರವಾಗುತ್ತಿವೆ. ಯಾದಗಿರಿಯ ಸುರಪುರ ತಾಲ್ಲೂಕಿನ ಮಹಿಳಾ ಶಿಕ್ಷಕರ ವೇದಿಕೆಗಳ ಪ್ರಕ್ರಿಯೆಗಳು, ಚಟುವಟಿಕೆಗಳು ಹಾಗೂ ಚರ್ಚೆಯ ವಿಷಯಗಳು ಮಹಿಳಾ ಶಿಕ್ಷಕರ ಭಾಗವಹಿಸುವಿಕೆಗೆ ಪೂರಕವಾಗಿದ್ದು ಮಹಿಳಾ ಸಬಲೀಕರಣಕ್ಕೆ ನಾಂದಿಯಾಗಿದೆ ಎನ್ನುವುದನ್ನು ಇಲ್ಲಿ ಗುರುತಿಸಲಾಗಿದೆ.

More in Education

Browse all →