HomeEducation › ಶಾಲಾ ಶಿಕ್ಷಕನ ಅಂತರಾಳದ ನುಡಿಗಳು

Cover of ಶಾಲಾ ಶಿಕ್ಷಕನ ಅಂತರಾಳದ ನುಡಿಗಳು

ಶಾಲಾ ಶಿಕ್ಷಕನ ಅಂತರಾಳದ ನುಡಿಗಳು

ಹೇಮರಾಜ್, ಭಟ್

FormatEbook
LanguageKannada
ReadingIncluded
Full text being prepared Keep a copy ₹9
About this book
ಉತ್ತರಾಕಾಂಡ್ ರಾಜ್ಯದ ಉತ್ತರಕಾಶಿ ಜಿಲ್ಲೆಯೊಂದರ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷರಾಗಿದ್ದ ಹೇಮ್ ರಾಜ್ ಭಟ್ ಎನ್ನುವವರು ದಾಖಲಿಸಿದ್ದ ತಮ್ಮ ದೈನಂದಿನ ಅನುಭವಗಳ ದಿನಚರಿಯನ್ನು ಪುಸ್ತಕಾಗಿ ಸಂಕಲಿಸಿ ಪ್ರಕಟಿಸಲಾಗಿದೆ. ಇದು ಒಬ್ಬ ಶಿಕ್ಷಕನಾಗಿ ತನ್ನ ಶಾಲೆಯಲ್ಲಿ ನಡೆದ ದೈನಂದಿನ ಕಲಾಪಗಳ ದಿನವಹಿ ದಾಖಲೆಯಾಗಿದೆ. ಈ ಪುಸ್ತಕದಲ್ಲಿ ಕಲಾಪಗಳ ವಿವರಗಳ ಜೊತೆಗೆ ತಮ್ಮ ವೃತ್ತಿಯ ಬಗೆಗಿನ ಬದ್ದತೆ, ವಿಶ್ವಾಸ ಮತ್ತು ಪ್ರೀತಿಯಿರುವ ಶಿಕ್ಷಕರಾಗಿ ಹೇಮ್ ರಾಜ್ ಅವರ ಅಭಿಪ್ರಾಯಗಳು ಮತ್ತು ಪರ್ಯಾಲೋಚನೆಗಳನ್ನು ಕಾಣಬಹುದು. ಈ ದಿನಚರಿಯ ಪ್ರತಿ ಪುಟದಲ್ಲಿಯೂ ಶಾಲೆ ಮತ್ತು ಅದರ ಪರಿಸರ, ಮಕ್ಕಳು ಮತ್ತು ಅವರ ಸಮುದಾಯದ ಸಾಮಾಜಿಕ ಸನ್ನಿವೇಶಗಳು, ಶಾಲೆ ವ್ಯವಸ್ಥೆಯ ಸುತ್ತವಿರುವ ಆಡಳಿತಶಾಹಿ ಅವುಗಳ ಇತಿ ಮತ್ತು ಮಿತಿಗಳು ಲೇಖಕರು ಪರಿಚಯಿಸುತ್ತಾರೆ. ಈ ಪುಸ್ತಕವು ಶಾಲೆ ಮತ್ತು ಅದನ್ನು ಒಳಗೊಂಡಿರುವ ವಿಶಾಲ ಶೈಕ್ಷಣಿಕ ವ್ಯವಸ್ಥೆಯ ವಿವಿಧ ಮಗ್ಗುಲುಗಳನ್ನು ಪರಿಚಯಿಸುತ್ತದೆ ಶಿಕ್ಷಕನೊಬ್ಬನ ಕಣ್ಣೋಟದಿಂದ ಹಿಡಿದಿಡುತ್ತದೆ ಮಾತ್ರವಲ್ಲ ಅವುಗಳ ವಾಸ್ತವಿಕ ಸ್ವರೂಪವನ್ನು ಚಿತ್ರಿಸುತ್ತದೆ. ಈ ದಿನಚರಿಯಲ್ಲಿ ಇದೇ ಲೇಖಕರಿಂದ ರಚಿತವಾದ ಕವಿತೆಗಳನ್ನು ಅಳವಡಿಸಿರುವುದು ಔಚಿತ್ಯಪೂರ್ಣವಾಗಿದೆ.

More in Education

Browse all →