HomeEducation › ವಿಜ್ಞಾನದಲ್ಲಿ ಬೋಧನಾ ಸಾಧನಗಳಾಗಿ ಕಥೆಗಳು ಮತ್ತು ಚಿತ್ರಗಳು

Cover of ವಿಜ್ಞಾನದಲ್ಲಿ ಬೋಧನಾ ಸಾಧನಗಳಾಗಿ ಕಥೆಗಳು ಮತ್ತು ಚಿತ್ರಗಳು

ವಿಜ್ಞಾನದಲ್ಲಿ ಬೋಧನಾ ಸಾಧನಗಳಾಗಿ ಕಥೆಗಳು ಮತ್ತು ಚಿತ್ರಗಳು

, ಶ್ರೀ ಮಹಾಲಕ್ಷ್ಮಿ

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ನಾವು ಹುಟ್ಟಿದ ಕ್ಷಣದಿಂದಲೇ ವಿವಿಧ ರೂಪಗಳಲ್ಲಿ ಸಂವಹನ ನಡೆಸಲು ಪ್ರಾರಂಭಿಸುತ್ತೇವೆ. ನಾವು ಈ ಜಗತ್ತಿಗೆ ಬಂದಿದ್ದೇವೆ ಎನ್ನುವುದನ್ನು ತಿಳಿಸಲು ನಾವು ಅಳಲು ಪ್ರಾರಂಭಿಸುತ್ತೇವೆ. ಇದು, ಮಾನವನು ಸಂವಹನದ ವಿವಿಧ ರೂಪಗಳ ಅನ್ವೇಷಣೆ ಮಾಡಲು ಪ್ರೇರೇಪಿಸಿದೆ. ಕಥೆ ಹೇಳುವುದು ಸಹ ಈ ಅನ್ವೇಷಣೆಗಳಲ್ಲಿ ಒಂದಾಗಿದೆ. ಕಥೆಗಳು ಸಂಬಂಧ ಕಲ್ಪಿಸಿಕೊಳ್ಳಲು ಮತ್ತು ಬದುಕಿನಲ್ಲಿ ಪ್ರಮುಖ ಅನುಭವಗಳನ್ನು ಕ್ರೋಢೀಕರಿಸಲು ಅವಕಾಶವನ್ನು ಒದಗಿಸುತ್ತವೆ. ಹೆಚ್ಚಿನ ಕಥೆ ಪುಸ್ತಕಗಳು ಚಿತ್ರಗಳೊಂದಿಗೆ ಗುರುತಿಸಿಕೊಂಡಿದ್ದರೂ, ಈ ಕಥೆಗಳಲ್ಲಿರುವ ಪದಗಳು ಮಗುವಿನ ಮೆದುಳಿನ ಒಳಗೆ ಚಿತ್ರಗಳ ರಚನೆಯನ್ನು ಉತ್ತೇಜಿಸುತ್ತವೆ ಹಾಗೂ ಮಕ್ಕಳಲ್ಲಿ ಯೋಚನೆಯ ಮತ್ತು ಕಲ್ಪನೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತವೆ. ಅರ್ಥ ಗ್ರಹಿಕೆಗಾಗಿ ಕಾಲ್ಪನಿಕ ಕಥೆಯನ್ನು ಒಗ್ಗೂಡಿಸಿದರೆ ಮಕ್ಕಳಲ್ಲಿ ಇದು ತಾರ್ಕಿಕ ಕೌಶಲ್ಯವನ್ನು ವೃದ್ಧಿಸುತ್ತದೆ. ಇದು ಗಣಿತ ಮತ್ತು ವಿಜ್ಞಾನದಲ್ಲಿ ಅತ್ಯಗತ್ಯ ಎಂದು ಈ ಲೇಖನದ ಲೇಖಕರು ಇಲ್ಲಿ ವ್ಯಕ್ತಪಡಿಸಿದ್ದಾರೆ

More in Education

Browse all →