Home › Education › ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ತರಗತಿಯಲ್ಲಿ ಅವಕಾಶ ನೀಡುವುದು-ಒಂದು ಪ್ರಾಯೋಗಿಕ ಅಧ್ಯಯನ
ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ತರಗತಿಯಲ್ಲಿ ಅವಕಾಶ ನೀಡುವುದು-ಒಂದು ಪ್ರಾಯೋಗಿಕ ಅಧ್ಯಯನ
Full text being prepared
Keep a copy $1
About this book
"ಮಗುವಿನ ಜೀವನದಲ್ಲಿ ಭಾಷೆಯ ಬೆಳವಣಿಗೆಯನ್ನು ಪುಷ್ಟೀಕರಿಸುವಲ್ಲಿ ಮತ್ತು ಮುಂದಿನ ಕಲಿಕೆಗೆ ಅಡಿಪಾಯವನ್ನು ಹಾಕಿಕೊಡುವಲ್ಲಿ ಸ್ವತಂತ್ರವಾದ ಮತ್ತು ಸೃಜನಶೀಲವಾದ ಅಭಿವ್ಯಕ್ತಿಯು (ಬರವಣಿಗೆ, ಚಿತ್ರ ಬಿಡಿಸುವುದು, ಕವನ ರಚಿಸುವುದು ಇತ್ಯಾದಿ) ಮುಖ್ಯವಾದುದು. ತರಗತಿಗಳಲ್ಲಿ ಇಂತಹ ಅಭಿವ್ಯಕ್ತಿಗೆ ಅವಕಾಶಗಳನ್ನು ಒದಗಿಸಿಕೊಡುವುದು ನಿರ್ಣಾಯಕವಾದುದು. ಈ ಲೇಖನವು ಎರಡು ಭಾಗಗಳನ್ನು ಹೊಂದಿದೆ. ಮೊದಲ ಭಾಗದಲ್ಲಿ ಸ್ವತಂತ್ರ ಮತ್ತು ಸೃಜನಶೀಲವಾದ ಅಭಿವ್ಯಕ್ತಿಯ ಬಗೆಗೆ ಶಿಕ್ಷಕರ ಗ್ರಹಿಕೆಗಳನ್ನು ಪರಿಶೀಲಿಸಲಾಗಿದೆ. ಐದು ಮತ್ತು ಆರನೇ ತರಗತಿಗಳಲ್ಲಿ ಭಾಷೆಯನ್ನು ಕಲಿಸುತ್ತಿರುವ ಶಿಕ್ಷಕರೊಂದಿಗಿನ ಮಾತುಕತೆಯಿಂದ ಇದನ್ನು ಸಾಧಿಸಲಾಗಿದೆ. ಈ ಮಾತುಕತೆಯಿಂದ, ಶಿಕ್ಷಕರಿಗೆ ಸ್ವತಂತ್ರ ಮತ್ತು ಸೃಜನಶೀಲವಾದ ಅಭಿವ್ಯಕ್ತಿಯು ಮಹತ್ವಪೂರ್ಣವಾದದ್ದು ಎನ್ನುವ ಭಾವನೆಯಿದ್ದರೂ, ಅದು ಹೆಚ್ಚು ಸಮಯವನ್ನು ಬೇಡುವುದರಿಂದ ಅದನ್ನು ಮಾಡಿಸಲಾಗುತ್ತಿಲ್ಲ; ಕೆಲವು ವಿದ್ಯಾರ್ಥಿಗಳು ಮಾತ್ರ ಸೃಜನಶೀಲವಾಗಿ ಅಭಿವ್ಯಕ್ತಿಸಬಲರು; ಹಾಗೆಯೆ ಸೃಜನಶೀಲವಾದ ಬರವಣಿಗೆ ಎನ್ನುವುದು ವಿಶಿಷ್ಟವಾದದ್ದು ಎನ್ನುವ ಅಭಿಪ್ರಾಯಗಳು ಶಿಕ್ಷಕರಲ್ಲಿ ಇರುವುದು ಕಂಡುಬರುತ್ತದೆ. ಈ ಲೇಖನದ ಎರಡನೆಯ ಭಾಗವು ಕರ್ನಾಟಕದ ಮಂಡ್ಯ ಉತ್ತರ ಬ್ಲಾಕ್‍ನ ಮೂರು ಸರ್ಕಾರಿ ಶಾಲೆಗಳ ಆರನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ನಡೆಸಿದ ಮೂರು ಚಟುವಟಿಕೆಗಳ ಅಧ್ಯಯನಗಳನ್ನು ಒಳಗೊಂಡಿದೆ. ಈ ಚಟುವಟಿಕೆ ಗಳೆಂದರೆ: (ಅ) ಖಾಲಿ ಹಾಳೆಯಲ್ಲಿ ಮುಕ್ತ ಬರವಣಿಗೆ (ಆ) ಚಿತ್ರ ನೋಡಿ ಬರೆಯುವುದು ಮತ್ತು (ಇ) ವಾಕ್ಯವೃಂದವನ್ನು ಓದಿ ಚಿತ್ರಮುಖೇನ ಅಭಿವ್ಯಕ್ತಿಸುವುದು. ಮಕ್ಕಳ ಸ್ವತಂತ್ರ ಮತ್ತು ಸೃಜನಶೀಲ ಅಭಿವ್ಯಕ್ತಿ ಮೌಲ್ಯಮಾಪನ ಕೈಪಿಡಿ (scoring guides) ಬಳಸಿ ವಿಶ್ಲೇಷಣೆಗೆ ಒಳಪಡಿಸಲಾಯಿತು ಮತ್ತು ಅವರ ಕಾರ್ಯನಿರ್ವಹಣೆಯನ್ನು ಆಧರಿಸಿ ಪರ್ಯಾಲೋಚನೆ (reflections) ಯೊಂದಿಗೆ ಅವಲೋಕಿಸಲಾಯಿತು. ಈ ಅಧ್ಯಯನವು ಸ್ವತಂತ್ರವಾಗಿ ಮತ್ತು ಸೃಜನಶೀಲವಾಗಿ ಅಭಿವ್ಯಕ್ತಿಯಲ್ಲಿ ತೊಡಗಿಕೊಳ್ಳಲು ಮಕ್ಕಳಿಗಿರುವ ಭಯ ಮತ್ತು ಸಮಸ್ಯೆಗಳು ಹಾಗೂ ಶಿಕ್ಷಕರ ಕಲಿಕೆಗಿರುವ ಸೂಚನೆಗಳನ್ನು ಚರ್ಚಿಸುವುದರೊಂದಿಗೆ ಪರಿಸಮಾಪ್ತಿ ಹೊಂದುತ್ತದೆ."
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske