HomeEducation › ಸಮನ್ವಯ ಮತ್ತು ಸುರಕ್ಷಿತ ಶಾಲಾ ಸಂಸ್ಕೃತಿಯನ್ನು ರೂಪಿಸುವುದು

Cover of ಸಮನ್ವಯ ಮತ್ತು ಸುರಕ್ಷಿತ ಶಾಲಾ ಸಂಸ್ಕೃತಿಯನ್ನು ರೂಪಿಸುವುದು

ಸಮನ್ವಯ ಮತ್ತು ಸುರಕ್ಷಿತ ಶಾಲಾ ಸಂಸ್ಕೃತಿಯನ್ನು ರೂಪಿಸುವುದು

ಶರ್ಮ, ಪ್ರಣಲೀ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಮಗುವಿನ ಸಾಮರ್ಥ್ಯಗಳು, ಜಾತಿ, ಲಿಂಗ, ಭಾಷೆ, ಸಮುದಾಯ ಅಥವಾ ಧರ್ಮವನ್ನು ಆಧರಿಸಿ ನಡೆಸುವ ತಾರತಮ್ಯದ ಶಾಲಾ ಅಭ್ಯಾಸಗಳು ದುರ್ಬಲ ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು ಮತ್ತು ದುರ್ಬಲ ಶೈಕ್ಷಣಿಕ ಸಾಧನೆಗೆ ಕಾರಣವೆನಿಸುತ್ತವೆ. ದೈಹಿಕವಾಗಿ, ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಅಸುರಕ್ಷಿತ ಭಾವನೆ ಉಂಟಾದರೆ ಅದು ಒಬ್ಬ ವ್ಯಕ್ತಿಯ ಕೇಳುವ, ಸ್ಪಷ್ಟವಾಗಿ ಯೋಚಿಸುವ ಮತ್ತು ಕಲಿಯುವ ಸಾಮರ್ಥ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ನಾವು ಸುರಕ್ಷಿತ ಭಾವನೆಯನ್ನು ಹೊಂದಿದ್ದೇವೆಯೇ ಅಥವಾ ಇಲ್ಲವೇ ಎನ್ನುವುದು ನಮ್ಮ ಭಾವನಾತ್ಮಕ ಅನುಭವಗಳ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಮುಂದೆ ನಮ್ಮ ಸಾಮಾಜಿಕ ಅನುಭವಗಳ ಮೇಲೆ ಪ್ರಭಾವ ಬೀರುತ್ತದೆ. ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸುರಕ್ಷಿತವೆನಿಸುವ ಶಾಲೆಯನ್ನು ಸೃಷ್ಟಿಸಬೇಕಾದರೆ, ಸುರಕ್ಷತೆ ಹಾಗೂ ಭದ್ರತೆಯು ಕಲಿಕೆಗೆ ಬೇಕಾಗುವ ಪೂರ್ವಾಪೇಕ್ಷಿತ ಅಂಶ ಎಂಬುದರ ಮೇಲೆ ಗಮನವಿಟ್ಟು, ಶಾಲೆಯೊಳಗೆ ಮೂಲಸೌಕರ್ಯ, ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆಗಳು ಮತ್ತು ಮನೋ-ಸಾಮಾಜಿಕ ಚಾಲಕ ಶಕ್ತಿಗಳಿಗೆ ನಿರಂತರ ಮತ್ತು ಸಮಗ್ರ ಗಮನವನ್ನು ನೀಡಬೇಕು ಎನ್ನುತ್ತಾರೆ ಲೇಖಕರು.

More in Education

Browse all →