HomeEducation › ಸುಲಭ ಲಭ್ಯ ಸಾಮಗ್ರಿಗಳ ಮೂಲಕ ವಿಜ್ಞಾನದ ಪರಿಶೋಧನೆ

Cover of ಸುಲಭ ಲಭ್ಯ ಸಾಮಗ್ರಿಗಳ ಮೂಲಕ ವಿಜ್ಞಾನದ ಪರಿಶೋಧನೆ

ಸುಲಭ ಲಭ್ಯ ಸಾಮಗ್ರಿಗಳ ಮೂಲಕ ವಿಜ್ಞಾನದ ಪರಿಶೋಧನೆ

ಮಧುಸೂಧನ್, ಎಚ್.ಆರ್.

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಒಳ್ಳೆಯ ಬೋಧನೆ ಕಲಿಕೆ ಅಭ್ಯಾಸವು, ತರಗತಿಗೆ ವೈಜ್ಞಾನಿಕ ವಿದ್ಯಮಾನವನ್ನು ತರುವ ಆಸಕ್ತಿಕರ ಚಟುವಟಿಕೆಗಳನ್ನು ಒಳಗೊಂಡಿದ್ದು, ವಿಜ್ಞಾನವು ಕಾರ್ಯರೂಪಕ್ಕೆ ಬರುವುದನ್ನು ಮಕ್ಕಳು ಅನುಭವಿಸುವಂತೆ ಮಾಡುತ್ತದೆ. ಇದಕ್ಕೆ ಔಪಚಾರಿಕ ಪ್ರಯೋಗಾಲಯದ ಉತ್ಕೃಷ್ಟತೆಯ ಅಗತ್ಯವಿಲ್ಲ. ಸಾಮಾನ್ಯವಾಗಿ ಲಭ್ಯವಿರುವ ಸಾಮಗ್ರಿಗಳು, ಚೌಕಟ್ಟನ್ನು ಮೀರಿ ಯೋಚಿಸುವ ಮನಸ್ಸು, ವೈಜ್ಞಾನಿಕ ಪರಿಕಲ್ಪನೆಗಳ ಪ್ರಾತ್ಯಕ್ಷಿಕೆ ನೀಡಲು ಈ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುವ ಕುತೂಹಲವಷ್ಟೇ ನಮಗೆ ಸಾಕು. ತರಗತಿಯ ಶಿಕ್ಷಕರಾಗಿ ನಾವು ಬಳಸುವ ವಸ್ತುಗಳ ಗುಣಲಕ್ಷಣಗಳು ಮತ್ತು ಬಳಕೆಗಳನ್ನು ಅರಿತುಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಮ್ಮ ಯೋಚನೆಗಳನ್ನು ರೂಪಿಸಿಕೊಳ್ಳಲು ಸಮಯ ತಗಲುತ್ತದೆ. ಆದರೆ ಈ ಉದ್ದೇಶಕ್ಕಾಗಿ ಖರ್ಚು ಮಾಡಿದ ಸಮಯವು ಖಂಡಿತವಾಗಿಯೂ ಪೋಲಾಗುವುದಿಲ್ಲ. ಮುಖ್ಯವಾಗಿ, ವಿಜ್ಞಾನವು ʻಹೊಸ ಮೂಢನಂಬಿಕೆʼಯಾಗಿ ಕುಸಿಯಲು ನಾವು ಬಿಡುವುದಿಲ್ಲ ಎಂದು ಲೇಖಕರು ಇಲ್ಲಿ ಕೆಲವೊಂದು ಉದಾಹರಣೆಗಳ ಮೂಲಕ ಹೇಳಿದ್ದಾರೆ.

More in Education

Browse all →