HomeEducation › ಆರಂಭಿಕ ಬಾಲ್ಯ ಶಿಕ್ಷಣ: ಲರ್ನಿಂಗ್ ಕರ್ವ್ ಜೊತೆಗೆ ಸಂವಾದ

Cover of ಆರಂಭಿಕ ಬಾಲ್ಯ ಶಿಕ್ಷಣ: ಲರ್ನಿಂಗ್ ಕರ್ವ್ ಜೊತೆಗೆ ಸಂವಾದ

ಆರಂಭಿಕ ಬಾಲ್ಯ ಶಿಕ್ಷಣ: ಲರ್ನಿಂಗ್ ಕರ್ವ್ ಜೊತೆಗೆ ಸಂವಾದ

ಪ್ರಸಾದ್, ಇಂದು

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಆರಂಭಿಕ ಬಾಲ್ಯ ಶಿಕ್ಷಣದ ಬಗ್ಗೆ ಸವಿಸ್ತಾರವಾದ ಚರ್ಚೆ ನಡೆಸುತ್ತದೆ. ವ್ಯಕ್ತಿಯ ಜೀವನದಲ್ಲಿ ಆರಂಭಿಕ ಎಂಟು ವರ್ಷಗಳು ಬಹು ಮುಖ್ಯವಾದವು. ಮಗುವೊಂದು ಆ ಸಂದರ್ಭದಲ್ಲಿ ಎಂತಹ ವಾತಾವರಣದಲ್ಲಿ ಬೆಳೆಯುತ್ತದೋ ಅದು ಆ ಮಗುವಿನ ಇಡೀ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಹೀಗಿರುವಾಗ ಆ ವಯಸ್ಸಿನ ಕಲಿಕೆ ಫಲಪ್ರದವಾಗಿರುವಂತೆ ನಾವು ಯಾವ ಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುವ ಕಡೆ ದೃಷ್ಟಿ ಹರಿಸುತ್ತದೆ. ಯಾರು ಬೇಕಾದರೂ ಶಿಶುವಿಹಾರ ನಡೆಸಬಹುದು ಎಂಬ ವ್ಯವಸ್ಥೆಯಲ್ಲಿ, ಯಾವುದೇ ನಿಯಂತ್ರಣವಿಲ್ಲದ ಖಾಸಗಿ ವಲಯದತ್ತ ಆತಂಕ ವ್ಯಕ್ತಪಡಿಸುತ್ತದೆ. ಮಕ್ಕಳಿಗೆ ಉತ್ತಮ ಕಲಿಕಾ ವಾತವರಣದಷ್ಟೇ ಉತ್ತಮ ಪೌಷ್ಟಿಕ ಆಹಾರವು ಅತ್ಯಗತ್ಯವಾಗಿದೆ. ಇಂದು ಅವಿಭಕ್ತ ಕುಟುಂಬಗಳು ಕಾಣೆಯಾಗಿ, ಹೆಚ್ಚು ಮಕ್ಕಳ ಸಂಸಾರವೂ ಇಲ್ಲವಾಗಿ ನಾವು ಒಂದು ಸಂಕ್ರಮಣ ಕಾಲಘಟ್ಟದಲ್ಲಿದ್ದೇವೆ. ಈ ಸಂದರ್ಭದಲ್ಲಿ ಮಕ್ಕಳ ಆರಂಭಿಕ ಶಿಕ್ಷಣಕ್ಕೆ ಒಂದು ಸೂಕ್ತ ನೀತಿ ನಿಯಮ ಬೇಕು ಎನ್ನುತ್ತಾರೆ ಲೇಖಕಿ.

More in Education

Browse all →