Home › Education › ಓದುವುದು ಮತ್ತು ಬರೆಯುವುದನ್ನು ಅನುಕೂಲಿಸುವುದು
ಓದುವುದು ಮತ್ತು ಬರೆಯುವುದನ್ನು ಅನುಕೂಲಿಸುವುದು
Full text being prepared
Keep a copy $1
About this book
"ಈ ಲೇಖನವನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸರ್ಕಾರಿ ಶಾಲೆಯ ಶಿಕ್ಷಕರೊಂದಿಗೆ ಅರ್ಥ ರೂಪಣೆಯ ದೃಷ್ಟಿಕೋನದ ಆಧಾರದ ಮೇಲೆ ಬರೆಯುವ ಮತ್ತು ಓದುವ ಪ್ರಕ್ರಿಯೆಯನ್ನು ಅನುಕೂಲಿಸುವುದರ ಕುರಿತಾಗಿ ನಡೆಸಿದ ಪ್ರಾತ್ಯಕ್ಷಿಕೆಯನ್ನು ಆಧಾರವಾಗಿರಿಸಿಕೊಂಡು ಬರೆಯಲಾಗಿದೆ. ಈ ಅನುಕೂಲಿಸುವಿಕೆಯ ಪ್ರಕ್ರಿಯೆಯನ್ನು ಗಮನಿಸಲು ಕಾರ್ಯಹಾಳೆಯನ್ನು (worksheet) ಸಾಧನವಾಗಿ ಬಳಸಿಕೊಳ್ಳಲಾಯಿತು. ಇದಕ್ಕಾಗಿ, ಮೊದಲಿಗೆ ಕಾರ್ಯಹಾಳೆಯನ್ನು ವಿನ್ಯಾಸಗೊಳಿಸುವ ಮತ್ತು ಅದನ್ನು ಬಳಸುವ ರೂಪುರೇμÉಯನ್ನು ಸಿದ್ಧಪಡಿಸಿಕೊಳ್ಳಲಾಯಿತು. ಇದನ್ನು ಹೇಗೆ ವಿಭಿನ್ನವಾಗಿ ಮಾಡಬೇಕು ಎನ್ನುವುದನ್ನು ಕಾರ್ಯಹಾಳೆಯ ತಯಾರಿಕೆಯ ಪ್ರತಿಕ್ರಿಯೆಯು ಕಲಿಸಿಕೊಟ್ಟಿತ್ತು. ಶಿಕ್ಷಕರ ಸಹಯೋಗದಲ್ಲಿ ಪ್ರಮಾಣೀಕೃತ ಮತ್ತು ಪ್ರಾದೇಶಿಕ ಕನ್ನಡಗಳಲ್ಲಿ ಕಾರ್ಯಹಾಳೆಯನ್ನು ಪುನರ್ ವಿನ್ಯಾಸಗೊಳಿಸಲಾಯಿತು. ಈ ಪುನರ್ ವಿನ್ಯಾಸಗೊಂಡ ಕಾರ್ಯಹಾಳೆಗೆ ಮಕ್ಕಳಿಂದ ಓದುವ ಮತ್ತು ಬರೆಯುವಿಕೆಯ ಪ್ರಕ್ರಿಯೆಗೆ ಹೆಚ್ಚಿನ ಸ್ಪಂದನೆ ದೊರಕಿತು. ಇದು ಅಂತಿಮವಾಗಿ ಏನನ್ನು ಹೇಳುತ್ತದೆ ಎಂದರೆ, ಅನುಕೂಲಿಸುವಿಕೆಯ ಪ್ರಯತ್ನಕ್ಕೆ ಮಕ್ಕಳು ಶಾಲೆಗೆ ತರುವ ಭಾಷಿಕ ಸಂಪನ್ಮೂಲಗಳ ಬಗೆಗೆ ಅನುಕೂಲಿಸುವವರಿಗೆ ಸ್ಪಷ್ಟ ಜ್ಞಾನವಿರಬೇಕು. ಅವುಗಳ ಮೌಲ್ಯವನ್ನು ಗುರುತಿಸಿ ಅದರ ಆಧಾರದ ಮೇಲೆ ಕಲಿಕೆಗೆ ಸಹಾಯ ಮತ್ತು ಯೋಜನೆಯನ್ನು ರೂಪಿಸಿರಬೇಕು. ಮಕ್ಕಳ ಸುತ್ತಮುತ್ತಲಿನ ಪರಿಸರದ (ಇದು ಭಾಷಿಕ ಪರಿಸರವನ್ನು ಒಳಗೊಳ್ಳುತ್ತದೆ) ಸಂಪರ್ಕದಲ್ಲಿರುವ ಈ ರೀತಿಯ ಸಾಕ್ಷರತಾ ಬೆಳವಣಿಗೆ ಪ್ರಕ್ರಿಯೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಇದು ಮಕ್ಕಳ ಓದುವಿಕೆ ಮತ್ತು ಬರೆಯುವಿಕೆಯನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ. ಈ ಲೇಖನದ ಕೊನೆಯಲ್ಲಿ ಸುರಪುರದ ಇತರ ಶಾಲೆಗಳ ಶಿಕ್ಷಕರಿಗೂ ಈ ಪ್ರತಿಕ್ರಿಯೆಯನ್ನು ಕುರಿತು ಮಾಹಿತಿ ನೀಡಿದ್ದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. "
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske