HomeEducation › ಮಕ್ಕಳ ಸಾಹಿತ್ಯದ ವಿವಿಧ ಅಂಶಗಳ ಮೇಲೆ ಒಂದು ವಿಚಾರ ಸಂಕಿರಣ

Cover of ಮಕ್ಕಳ ಸಾಹಿತ್ಯದ ವಿವಿಧ ಅಂಶಗಳ ಮೇಲೆ ಒಂದು ವಿಚಾರ ಸಂಕಿರಣ

ಮಕ್ಕಳ ಸಾಹಿತ್ಯದ ವಿವಿಧ ಅಂಶಗಳ ಮೇಲೆ ಒಂದು ವಿಚಾರ ಸಂಕಿರಣ

ಕುಮಾರ್, ವಿಜಯ್

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ನವದೆಹಲಿಯ ಕಥಾಮಂಚ್ ಸಂಸ್ಥೆಯು ಏರ್ಪಡಿಸಿದ್ದ 'ಮಕ್ಕಳ ಸಾಹಿತ್ಯದ ವಿವಿಧ ಅಂಶಗಳು" ಎಂಬ ಒಂದು ದಿನದ ವಿಚಾರ ಸಂಕಿರಣದ ವರದಿಯಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬAಧಪಟ್ಟು ವಿವಿಧ ಮಜಲುಗಳಲ್ಲಿ, ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಶಾಲಾ ಶಿಕ್ಷಕರು, ಶಿಕ್ಷಕ ತರಬೇತುದಾರರು, ವಿಶ್ವವಿದ್ಯಾಲಯದ ಪ್ರಾಧ್ಯಪಕರು ಹಾಗೂ ಸಮಾನ ಆಸಕ್ತರನ್ನೊಳಗೊಂಡ ಈ ವಿಚಾರ ಸಂಕಿರಣದಲ್ಲಿ ಕಥೆಗಳ ಮೂಲಕ ಮಕ್ಕಳ ಶಿಕ್ಷಣವನ್ನು ಹೇಗೆ ಶ್ರೀಮಂತಗೊಳಿಸಬಹುದೆAಬ ಚರ್ಚೆ ನಡೆಯಿತು. ಕಥೆಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗಳು, ಎಳೆಯ ಮಕ್ಕಳ ಮೇಲೆ ಅವುಗಳು ಬೀರುವ ಸಕಾರಾತ್ಮಕ ಪ್ರಭಾವವನ್ನು ಚರ್ಚಿಸಲಾಯಿತು. ಕಥೆಗಳ ವಿವಿಧ ಸ್ವರೂಪಗಳು, ಬದಲಾಗಬೇಕಾದ ಕೆಲವು ಲಿಂಗಾಧಾರಿತ ಸಿದ್ಧಮಾದರಿಗಳ ಬಗ್ಗೆ ವಿಶೇಷ ಬೆಳಕು ಚೆಲ್ಲಲಾಯಿತು. ಮಕ್ಕಳ ಶಿಕ್ಷಣದಲ್ಲಿ, ಅವರ ಭಾಷಾ ಕೌಶಲ್ಯದ ಬೆಳವಣಿಗೆ ಹಾಗೂ ಅವರು ಸಮಾಜವನ್ನು ಗ್ರಹಿಸಿ ಅದಕ್ಕೆ ಸ್ಪಂದಿಸುವ ರೀತಿಯನ್ನು ರೂಪಿಸುವಲ್ಲಿ ಕಥೆಗಳು ಹೇಗೆ ಮುಖ್ಯ ಪಾತ್ರ ವಹಿಸುತ್ತವೆ ಎಂದು ಅನುಮೋದಿಸಲಾಯಿತು.

More in Education

Browse all →