HomeEducation › ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಹಣಕಾಸು ರಚನೆ

Cover of ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಹಣಕಾಸು ರಚನೆ

ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಹಣಕಾಸು ರಚನೆ

ಪಾರ್ವತಿ, ಪೂಜಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಇಲ್ಲಿ ಉದ್ಧೃತವಾಗಿರುವ ಅಧ್ಯಾಯದ ಭಾಗವು ಭಾರತದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ನೀತಿ ಮತ್ತು ಯೋಜನೆಯನ್ನು ರೂಪಿಸುವ ವ್ಯವಸ್ಥೆಯ ಪಕ್ಷಿನೋಟವನ್ನು ನೀಡುತ್ತದೆ. ಭಾರತದಲ್ಲಿ ಶೈಕ್ಷಣಿಕ ನೀತಿ ಮತ್ತು ಯೋಜನೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಯೋಗದಲ್ಲಿ ನಿರ್ವಹಿಸಲ್ಪಡುತ್ತಿದ್ದು ಕೇಂದ್ರ ಯೋಜನಾ ಆಯೋಗದ ಶೈಕ್ಷಣಿಕ ವಿಭಾಗ ಹಾಗೂ ರಾಜ್ಯ ಯೋಜನಾ ಆಯೋಗಗಳು ಶಿಕ್ಷಣದ ಜವಾಬ್ದಾರಿಯನ್ನು ಹೊರುತ್ತವೆ. ಶಿಕ್ಷಣದ ಸಮರ್ಪಕ ನಿರ್ವಹಣೆಗೆ, ವಿಶೇಷವಾಗಿ ಪ್ರಾಥಮಿಕ ಶಿಕ಼್ಣಣಕ್ಕೆ ಸಂಬಂಧಿಸಿದಂತೆ, ವಿವಿಧ ಸ್ತರಗಳಲ್ಲಿ ಇರುವ ಸಾಂಸ್ಥಿಕ, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು, ಅಧಿಕಾರಿಗಳನ್ನು, ಅವರ ಕಾರ್ಯವಿಧಾನವನ್ನು ಹಾಗೂ ಜವಾಬ್ದಾರಿಗಳನ್ನು ಲೇಖನವು ಸ್ಥೂಲವಾಗಿ ಪರಿಚಯ ಮಾಡಿಕೊಡುತ್ತದೆ. ಪ್ರಾಥಮಿಕ ಶಿಕ಼್ಣಣವು ಪ್ರಧಾನವಾಗಿ ರಾಜ್ಯ ಆಡಳಿತದ ಮೇಲ್ವಿಚಾರಣೆಗೆ ಬರುವುದರಿಂದ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಸಂಸ್ಥೆಗಳ ಪರಿಚಯ ಇಲ್ಲಿದೆ. ಕೆಲವು ರಾಜ್ಯಗಳಲ್ಲಿ ಇರುವ ಪ್ರಾಥಮಿಕ ಶಿಕ಼್ಣಣದ ಹೊಸ ಸಂಘಟನಾತ್ಮಕ ಪರಿಚಯವೂ ಈ ಲೇಖನದಲ್ಲಿದೆ.

More in Education

Browse all →