Home › Literature › ವೈವಿಧ್ಯವನ್ನು ಅರ್ಥಮಾಡಿಕೊಳ್ಳುವುದು
ವೈವಿಧ್ಯವನ್ನು ಅರ್ಥಮಾಡಿಕೊಳ್ಳುವುದು
Full text being prepared
Keep a copy ₹9
About this book
"ಭಾರತದಲ್ಲಿ ವೈವಿಧ್ಯಗಳ ಪರಿಮಾಣ ಅಗಾಧವಾದದ್ದು, ಈ ವೈವಿಧ್ಯವು ಜನಾಂಗ, ಬಣ್ಣ, ಲಿಂಗ, ಭಾಷೆ, ಜಾತಿ, ಆಶೆಯಗಳು, ಸಮುದಾಯ, ಸಾಮಾಜಿಕ ಗುಂಪು, ಆರ್ಥಿಕ ಸ್ಥಾನಮಾನ, ವೃತ್ತಿಗಳು, ಭೌಗೋಳಿಕ ಪ್ರಾಂತ್ಯಗಳು, ಇತ್ಯಾದಿಗಳ ಮೂಲಕ ವ್ಯಕ್ತವಾಗುತ್ತದೆ. ವೈವಿಧ್ಯವನ್ನು ಕೆಲವೊಮ್ಮೆ ಸಮಸ್ಯೆಯೆಂದು ಪರಿಗಣಿಸಲಾಗಿದ್ದು, ಇದನ್ನು ಒಂದು ಸಂಪನ್ಮೂಲವಾಗಿ ನೋಡದೆ ಇರುವುದು ವಿಷಾದನೀಯ. ಆದಾಗ್ಯೂ ವೈವಿಧ್ಯವನ್ನು ಒಂದು ಸಂಪನ್ಮೂಲವೆಂದೇ ಅರ್ಥಮಾಡಿಕೊಳ್ಳುವುದು ಶಾಲಾಪೂರ್ವ ಶಿಕ್ಷಣದಲ್ಲಿ ಅಭಿವೃದ್ದಿಯನ್ನು ತರುವಲ್ಲಿ ಮುಖ್ಯವಾಗುತ್ತದೆ. ಮುಖ್ಯವಾಗಿ ನಾವು ಶಾಲೆಯಲ್ಲಿ ಕಾಣುವ ವೈವಿಧ್ಯ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಇಲ್ಲಿ ಅಧ್ಯಯನ ಮಾಡುತ್ತೇವೆ. ವೈವಿಧ್ಯದಿಂದಾಗಿ ಮಕ್ಕಳಿಗೆ ಸಿಗುವ ಅನುಕೂಲತೆಯ ಜೊತೆಗೆ ಅವರು ಎದುರಿಸುವ ಹಲವಾರು ಪರಿಣಾಮಗಳನ್ನು ಮತ್ತು ಅವುಗಳನ್ನು ಸೂಕ್ತ ಮಾರ್ಗಗಳಲ್ಲಿ ನಿವಾರಿಸುವ ಅಂಶಗಳನ್ನು ನೋಡಬಹುದಾಗಿದೆ. ಎನ್ ಸಿ ಎಫ್ 2005 ಗುಣಮಟ್ಟ ಶಿಕ್ಷಣವನ್ನು ಆಂತರೀಕರಣಗೊಳಿಸುವುದರ ಅಗತ್ಯತೆ ಮತ್ತು ಸಮಾನತೆಯೊಂದಿಗೆ ಇದರ ಸಮ್ಮಿಳಿತದ ಪ್ರಾಮುಖ್ಯತೆ ಇದೆ ಎಂದು ಉಲ್ಲೇಖಿಸಿದೆ. ಅಂತೆಯೇ ಪ್ರತಿಯೊಂದು ಮಗುವೂ ಶಾಲಾಪೂರ್ವ ಶಿಕ್ಷಣದಲ್ಲಿ ಭಾಗಿಯಾಗುವಂತಾಗಿ, ಎಲ್ಲರೂ ಸಮಾಜದಲ್ಲಿ ಸಮಾನರು ಎಲ್ಲರಿಗೂ ಎಲ್ಲಾ ವಿಧವಾದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕಿದೆ ಎಂದು ತಿಳಿಯುವುದು ಇಲ್ಲಿ ಮುಖ್ಯವಾಗಿದೆ. "