HomeEducation › ಬೋಧನೆಗೆ ರಚನಾತ್ಮಕ ವಿಧಾನ

Cover of ಬೋಧನೆಗೆ ರಚನಾತ್ಮಕ ವಿಧಾನ

ಬೋಧನೆಗೆ ರಚನಾತ್ಮಕ ವಿಧಾನ

ಗ್ಲೇಸರ್ಸ್ಫೆಲ್ಡ್, ಅರ್ನ್ಸ್ಟ್ ವಾನ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ರಚನಾವಾದಿ ಶಿಕ್ಷಣದ ಬಗ್ಗೆ ತಳೆಯುವ ಧೋರಣೆಯ ಸ್ವರೂಪದ್ದಾಗಿದೆ. ಲೇಖಕರು ಸರಿಯುತ್ತರಗಳನ್ನು ಬೋಧಿಸುವ ಬೋಧನೆಯಲ್ಲಿ ನಂಬಿಕೆಯಿಡುವ ಶಿಕ್ಷಣದ ತಾತ್ತ್ವಿಕ ನೆಲೆಗಟ್ಟು ತಿರಸ್ಕಾರ ಯೋಗ್ಯವೆಂಬ ಹೇಳಿಕೆಯಿಂದ ಆರಂಭಿಸುತ್ತಾರೆ. ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಹಲವು ಉದಾಹರಣೆಗಳ ಮೂಲಕ ಲೇಖಕರು ಹೇಗೆ ವಿದ್ಯಾರ್ಥಿಯು ತನ್ನ ಜ್ಞಾನವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂಬುದನ್ನು ವಿಶದಪಡಿಸುತ್ತಾರೆ. ಪರಿಕಲ್ಪನೆಗಳನ್ನು ಸಲೀಸಾಗಿ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ದಾಟಿಸಲು ಬರುವುದಿಲ್ಲ; ಅವುಗಳನ್ನು ವಿದ್ಯಾರ್ಥಿಯು ಮನಸ್ಸಿನಲ್ಲಿ ರೂಪಿಸಿಕೊಳ್ಳಬೇಕಾಗುತ್ತದೆ ಎಂಬುದು ಅವರ ನಂಬಿಕೆಯಾಗಿದೆ. ರಚನಾವಾದದ ದೃಷ್ಟಿಕೋನದಿಂದ ನೋಡಿದರೆ ಅರಿಯುವಿಕೆ ಎನ್ನುವುದೊಂದು ಹೊಂದಿಕೊಳ್ಳಬಲ್ಲ ಕ್ರಿಯೆಯಾಗಿದೆ; ಅಂದರೆ, ಜ್ಞಾನವನ್ನು, ನಮ್ಮ ಮನದ ಉದ್ದೇಶಗಳಿಗೆ ಅನುಸಾರವಾಗಿ ಯಶಸ್ವಿಗಳಾಗಲು ನಾವು ಕಂಡುಕೊಂಡಿರುವ ಪರಿಕಲ್ಪನೆ ಹಾಗೂ ಕ್ರಿಯೆಗಳ ಒಂದು ರೀತಿಯ ಸಂಚಯವೆಂದು ಅರ್ಥೈಸಬೇಕಾಗುತ್ತದೆ. ಲೇಖನವು ಸಂಜ್ಞಾನಾತ್ಮಕ ವಿಕಾಸದ ಸಿದ್ಧಾಂತದಲ್ಲಿ ಸಾಮಾಜಿಕ ಒಡನಾಟಕ್ಕಿರುವ ಮಹತ್ತ್ವವನ್ನು ಅನ್ವೇಷಿಸುವುದೇ ಅಲ್ಲದೆ, ಬೋಧನೆಗಾಗಿ ಕೆಲವು ಸಲಹೆಗಳನ್ನು ಮಂಡಿಸುತ್ತದೆ.

More in Education

Browse all →