HomeEducation › ವಿಜ್ಞಾನ ಮತ್ತು ಮೂಢನಂಬಿಕೆ

Cover of ವಿಜ್ಞಾನ ಮತ್ತು ಮೂಢನಂಬಿಕೆ

ವಿಜ್ಞಾನ ಮತ್ತು ಮೂಢನಂಬಿಕೆ

ಶರ್ಮಾ, ಆಶಿಶ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಪಠ್ಯಪುಸ್ತಕಗಳು ಚಂದ್ರನನ್ನು ಕುರಿತು ಹಾಗೂ ಚಂದ್ರನ ವಿವಿಧ ಹಂತಗಳು, ಚಂದ್ರನಲ್ಲಿ ಕಾಲಿಟ್ಟ ಗಗನಯಾನಿಗಳು, ಭೂಮಿಯೊಂದಿಗೆ ಚಂದ್ರನ ಸಂಬಂಧ, ಉಬ್ಬರವಿಳಿತಗಳು, ತನ್ನ ಅಕ್ಷದಲ್ಲಿ ಚಂದ್ರನ ಪರಿಭ್ರಮಣೆ, ಇತ್ಯಾದಿಗಳನ್ನು ಕುರಿತ ಸಿದ್ಧಾಂತಗಳು/ ಮಾಹಿತಿಯನ್ನು ನೀಡುತ್ತವೆ. ಆದರೆ ಸಾಮಾಜಿಕ ನಂಬಿಕೆಗಳು ಮತ್ತು ಮೂಢನಂಬಿಕೆಯನ್ನು ನಿವಾರಿಸುವುದನ್ನು ಕುರಿತು ಏನನ್ನೂ ಹೇಳುವುದಿಲ್ಲ. ಪಠ್ಯಪುಸ್ತಕಗಳು ವೈಜ್ಞಾನಿಕ ಮತ್ತು ತಾರ್ಕಿಕ ಅಧ್ಯಯನವನ್ನು ದೃಢೀಕರಿಸಿದರೆ, ನಮ್ಮ ದೈನಂದಿನ ಬದುಕು ಮಾತ್ರ ಮೂಢನಂಬಿಕೆಗಳು, ತಪ್ಪು ಗ್ರಹಿಕೆಗಳು ಮತ್ತು ತರ್ಕರಹಿತ ವಿಶ್ಲೇಷಣೆ/ ನಂಬಿಕೆಗಳಿಂದ ಕೂಡಿದೆ. ಆದರೆ ಮೂಢನಂಬಿಕೆಗಳನ್ನು ಕುರಿತು ಕೆಲಸವನ್ನು ಪ್ರಾರಂಭಿಸಲು ಪಠ್ಯಪುಸ್ತಕಗಳು ಒಳ್ಳೆಯ ಆರಂಭಿಕ ನೆಲೆ ಎನಿಸಲಿವೆ. ಏಕೆಂದರೆ, ತಮ್ಮ ಜ್ಞಾನವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಒಳಗೊಂಡಿರುವ, ವಿವಿಧ ಹಂತಗಳ ವಿದ್ಯಾರ್ಥಿಗಳು ಇವುಗಳನ್ನು ಬಳಸುತ್ತಾರೆ. ತಪ್ಪು ಗ್ರಹಿಕೆಯು ಬೆಳೆಯದಂತೆ ನೋಡಿಕೊಳ್ಳುವಲ್ಲಿ ತಾರ್ಕಿಕ ವಿಶ್ಲೇಷಣೆಯು ಸಹಕಾರಿ ಎನಿಸಲಿದೆ ಎಂದು ಲೇಖಕರು ಇಲ್ಲಿ ಹೇಳಿದ್ದಾರೆ.

More in Education

Browse all →