HomeEducation › ಸಮನ್ವಯ ಮತ್ತು ಸಮಾಜೋ-ಭಾವನಾತ್ಮಕ ಯೋಗಕ್ಷೇಮ

Cover of ಸಮನ್ವಯ ಮತ್ತು ಸಮಾಜೋ-ಭಾವನಾತ್ಮಕ ಯೋಗಕ್ಷೇಮ

ಸಮನ್ವಯ ಮತ್ತು ಸಮಾಜೋ-ಭಾವನಾತ್ಮಕ ಯೋಗಕ್ಷೇಮ

ಕೆ., ಮೈಥಿಲಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಮಾನವರಾದ ನಾವು ಪೂರ್ವಾಗ್ರಹವನ್ನು ಹೊಂದಿರುವುದು ಸಹಜ. ಆದರೆ ಓರ್ವ ಶಿಕ್ಷಕ ಅಥವಾ ವೃತ್ತಿಪರಳಾಗಿ ಪ್ರಜ್ಞಾಪೂರ್ವಕವಾಗಿ ಪಕ್ಷಪಾತವಿಲ್ಲದೆ ವರ್ತಿಸಬೇಕಾದುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿ ವಿದ್ಯಾರ್ಥಿಯೂ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತಾನೆ. ಈ ಸಾಮರ್ಥ್ಯಗಳ ಅಭಿವ್ಯಕ್ತಿಗೆ ಸರಿಯಾದ ಅವಕಾಶವನ್ನು ಮಾಡಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಲೇಖಕರ ಪ್ರಕಾರ, ತರಗತಿಯಲ್ಲಿ ಸಮನ್ವಯವಿಲ್ಲದಿರುವುದು, ವಿವಿಧ ಅಗತ್ಯತೆಗಳನ್ನು ಹೊಂದಿರುವ ವ್ಯಕ್ತಿಗೆ ಎದುರಾಗುವ ಮೊದಲ ಅಸಮಾನತೆಯಾಗಿದೆ. ಅಲ್ಲದೆ ಆ ವ್ಯಕ್ತಿಯು ಆ ಸಂದರ್ಭದಲ್ಲಿ ಅದನ್ನು ಗುರುತಿಸುವ ಮತ್ತು ತನ್ನ ಈ ಹಕ್ಕಿಗಾಗಿ ಹೋರಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರವು ಪ್ರಮುಖವಾದುದು. ಏಕೆಂದರೆ ಮಕ್ಕಳು ಶಾಲೆಯಲ್ಲಿ ತಮ್ಮ ಬದುಕಿನ ಹೆಚ್ಚಿನ ಸಮಯವನ್ನು ಅವರೊಂದಿಗೆ ಕಳೆಯುತ್ತಾರೆ ಎಂದು ಲೇಖಕರು ಇಲ್ಲಿ ವಿಶದಪಡಿಸುತ್ತಾರೆ.

More in Education

Browse all →