HomeEducation › ಬಹುಭಾಷಾ ತರಗತಿಗಳಲ್ಲಿ ಆರಂಭಿಕ ಭಾಷಾ ಬೋಧನೆ

Cover of ಬಹುಭಾಷಾ ತರಗತಿಗಳಲ್ಲಿ ಆರಂಭಿಕ ಭಾಷಾ ಬೋಧನೆ

ಬಹುಭಾಷಾ ತರಗತಿಗಳಲ್ಲಿ ಆರಂಭಿಕ ಭಾಷಾ ಬೋಧನೆ

ರಾಮಾಪೂರ, ಡಾ.ಲಿಂಗರಾಜ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಬೇರೆ ಮಾತೃಭಾಷೆಯ ಮಕ್ಕಳಿಗೆ ಭಾಷಾ ಬೋಧನೆಯ ಸವಾಲುಗಳು ಹಾಗು ಅದಕ್ಕಿರುವ ಪರಿಹಾರದ ಸಾಧ್ಯತೆಗಳನ್ನು ಚರ್ಚಿಸಲಾಗಿದೆ ; ಮಗುವೊಂದರ ಮನೆಯ ಭಾಷೆ ಹಾಗು ಶಾಲೆಯ ಬೋಧನೆಯ ಭಾಷೆ ಬೇರೆ ಬೇರೆಯಾದಾಗ ಅದರ ಭಾಷಾ ಕಲಿಕೆ ಕುಂಠಿತಗೊಳ್ಳುತ್ತದೆ . ಇಂತಹ ಸನ್ನಿವೇಶಗಳಲ್ಲಿ ಭಾಷಾ ಶಿಕ್ಷಕರು ಅನೇಕ ಸವಾಲುಗಳನ್ನೆದುರಿಸಬೇಕಾಗಿ ಬರುತ್ತದೆ . ಮಕ್ಕಳು ಓದು ಬರಹದಲ್ಲಿ ಆಸಕ್ತಿ ಕಳೆದುಕೊಳ್ಳುವ ಅಪಾಯವಿರುತ್ತದೆ . ಅದಕ್ಕೆ ಪರಿಹಾರವಾಗಿ ಲೇಖಕರು ಸಂಶೋಧನೆಗಳನ್ನು ಆಧಾರವಾಗಿ ಇಟ್ಟುಕೊಂಡು ಮಾತೃಭಾಷೆಯ ಮೂಲಕ ಶಾಲೆಯ ಭಾಷೆಯನ್ನು ಕಲಿಸುವ ಪರಿಹಾರ ಮುಂದಿಡುತ್ತಾರೆ . ಅದನ್ನು ಶಾಲೆಯಲ್ಲಿ ಪ್ರಯೋಗಿಸಿ ಸಕಾರಾತ್ಮಕ ಫಲಿತಾಂಶ ಕಂಡುಬಂದಿದ್ದನ್ನು ದಾಖಲಿಸುತ್ತಾರೆ . ತ್ರಿಭಾಷಾ ಸೂತ್ರದ ಹಿನ್ನೆಲೆಯಲ್ಲಿ ಬಹುಭಾಷಿಕತೆಯನ್ನು ಅಳವಡಿಸುವ ನಿಟ್ಟಿನಲ್ಲಿ ಈ ಲೇಖನ ಹಲವಾರು ಪ್ರಯೋಜನಕಾರಿ ಅಂಶಗಳನ್ನು ಹೊರಚೆಲ್ಲುತ್ತದೆ .

More in Education

Browse all →