HomeLiterature › ಬ್ಲೂಮ್‌ರವರ ವರ್ಗೀಕರಣ

Cover of ಬ್ಲೂಮ್‌ರವರ ವರ್ಗೀಕರಣ

ಬ್ಲೂಮ್‌ರವರ ವರ್ಗೀಕರಣ

ಓರೆ, ಎಂ.

FormatEbook
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಣ ತಜ್ಞರು ಎದುರಿಸುತ್ತಿರುವ ಮೂಲಭೂತ ಪ್ರಶ್ನೆ ಏನೆಂದರೆ "ಮಾನವನ ಆಲೋಚನೆಗಳನ್ನು ಸುಧಾರಿಸುವ ಬಗೆ ಹೇಗೆ ಎಂಬುದಾಗಿದೆ. ಅದನ್ನು ಸುಧಾರಿಸಲು ಆಲೋಚನೆಯ ಸ್ವರೂಪವನ್ನು ವ್ಯಾಖ್ಯಾನಿಸುವುದರಿಂದ ಪ್ರಾರಂಭಿಸಬೇಕಾಗುತ್ತದೆ. ಈಗಿರುವ ಜ್ಞಾನವನ್ನು ಉತ್ತಮ ಗೊಳಿಸಲು ʼಆಲೋಚನೆ ಎಂದರೇನು‘ ಎಂಬ ಕುರಿತು ಈ ಪ್ರಬಂಧದಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಬೆಂಜಮಿನ್ ಎಸ್. ಬ್ಲೂಮ್ ಆಲೋಚನೆಯ ಸ್ವರೂಪದ ಬಗ್ಗೆ ಸವಿಸ್ತಾರವಾಗಿ ಆಲೋಚಿಸಿದ ಚಿಂತಕರಾಗಿದ್ದಾರೆ. ಬ್ಲೂಮ್ರವರ ಮೊದಲ ಶಿಷ್ಯರಾದ ಎಲಿಯೆಟ್ ಡಬ್ಲ್ಯೂ ಐಸ್ನರ್ "ಕಂಡುಹಿಡಿಯುವ ಪ್ರಕ್ರಿಯೆಯನ್ನು ಅವರು ಗಾಢವಾಗಿ ಪ್ರೀತಿಸುತ್ತಿದ್ದರು. ಕಂಡುಹಿಡಿಯುವಿಕೆಯೇ ಅವರ ಶ್ರೇಷ್ಠ ಸಾಧನೆಯಾಗಿದೆ. ಬ್ಲೂಮ್ಸ್ ಮಹತ್ವದ್ದನ್ನು ತಕ್ಷಣ ಗುರುತಿಸುತ್ತಿದ್ದರು. ಬ್ಲೂಮ್ರವರ ವರ್ಗೀಕರಣವು ಮೊದಲ ಬಾರಿ ಪ್ರಕಟಗೊಂಡಾಗ ಹೆಚ್ಚು ಗಮನ ಸೆಳೆಯಲಿಲ್ಲವಾದರೂ ನಂತರದಲ್ಲಿ 22 ಭಾಷೆಗಳಲ್ಲಿ ಭಾಷಾಂತರವಾಯಿತು. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಹಾಗೂ ಅಧಿಕ ಬಾರಿ ನಮೂದಿಸಿರುವ ಉಲ್ಲೇಖಗಳಲ್ಲಿ ಅವರ ವರ್ಗೀಕರಣವೂ (ಟ್ಯಾಕ್ಸಾನಮಿ) ಒಂದಾಗಿದೆ.

More in Literature

Browse all →