Home › Education › ಔಪಚಾರಿಕ ಸಂಸ್ಥೆಗಳ ಮೂಲಕ ಶಿಕ್ಷಣ
ಔಪಚಾರಿಕ ಸಂಸ್ಥೆಗಳ ಮೂಲಕ ಶಿಕ್ಷಣ
Full text being prepared
Keep a copy $1
About this book
ಈ ಲೇಖನವು ಔಪಚಾರಿಕ ಸಂಸ್ಥೆಯ ರಚನೆಯನ್ನು ಕುಟುಂಬದ ರಚನೆಯೊಂದಿಗೆ ಹೋಲಿಸುತ್ತಲೇ, ಜರ್ಮನ್ ವಿದ್ವಾಂಸ ಮಾಕ್ಸ್ ವೆಬರ್ ‘ಆಡಳಿಶಾಹಿಗಳು’ ಎಂದು ಗುರುತಿಸಿ ‘ಔಪಚಾರಿಕ’ವೆಂದು ಚಿತ್ರಿಸಿರುವ ಅದರ ಮುಖ್ಯ ಗುಣಲಕ್ಷಣಗಳನ್ನು ಗುರುತಿಸುತ್ತದೆ. ಮಾತ್ರವಲ್ಲದೇ, ಆಧುನಿಕತೆ ಮತ್ತು ಆಧುನಿಕ ಸಂಸ್ಥೆಗಳ ಬಗೆಗಿರುವ ವಿಮರ್ಶೆಗಳನ್ನು ಗಮನಕ್ಕೆ ತರುತ್ತಾ, -ಆಧುನಿಕ ಶೈಕ್ಷಣಿಕ ರಚನೆಗಳು ಸಹ ಅಂತಹುದರಲ್ಲಿ ಒಂದಾಗಿರುವುದರಿಂದ- ಅದು ತನ್ನ ಸ್ವರೂಪದಲ್ಲಿಯೇ ಅಧೀಕಾರದೊಂದಿಗೆ ಉಪಕರಣಾತ್ಮಕವಾಗಿ ಅಂತರ್ಗತವಾಗಿದೆ. ಆದ್ದರಿಂದ ಇವು ಅರ್ಥಪೂರ್ಣವಾದ ಶಿಕ್ಷಣಕ್ಕೆ ಸವಾಲನ್ನು ಒಡ್ಡುತ್ತದೆನ್ನುವುದನ್ನು ಸೂಚಿಸುತ್ತದೆ. ಆದ್ದರಿಂದ, ಶಿಕ್ಷಣವು ಔಪಚಾರಿಕ ರಚನೆಗಳ ಅನುಕೂಲಗಳನ್ನು ಪಡೆಯುತ್ತಲೇ ಅದನ್ನು ಹೆಚ್ಚು ಮಾನವೀಯ ಮತ್ತು ಸಹಜವಾಗಿ ಮಾಡುವ ದಾರಿಗಳನ್ನು ಕಂಡುಕೊಳ್ಳುವುದು ಅತ್ಯಗತ್ಯ ಎಂದು ಒತ್ತಿ ಹೇಳುತ್ತದೆ. ತರಗತಿಯ ಗಾತ್ರದ ಮೇಲೆ ಮಿತಿ ವಿಧಿಸುವುದು ಇಂಥ ಕಾರ್ಯನೀತಿಯ ಬಹುಮುಖ್ಯ ಭಾಗ. ಅಂತೆಯೇ ಶಿಕ್ಷಕರು, ಆಡಳಿತ ವರ್ಗ ಮತ್ತು ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ಸಂಬಂಧದ ಹಾಗೂ ಸ್ನೇಹಪರತೆಯ ಸಂಸ್ಕೃತಿಯನ್ನು ಬೆಳಸಬೇಕು ಕೂಡ. ಶಾಲೆಗಳ ಕುರಿತ ಇವಾನ್ ಇಲ್ಲಿಚ್‍ರ ಟೀಕೆಯು ಅವುಗಳ ಅವೈಯಕ್ತಿಕತೆ ಮತ್ತು ಅಧಿಕಾರದ ಕೇಂದ್ರೀಕರಣದ ವಿರುದ್ಧ ಇದ್ದಿತ್ತು. ಅವರು ಇದಕ್ಕೆ ಸೂಚಿಸಿದ ಪರಿಹಾರವೇನೆಂದರೆ, ಅಧಿಕಾರವನ್ನು ಎಲ್ಲ ಸದಸ್ಯರಿಗೂ ಹಂಚುವುದು ಮತ್ತು ಮೇಲ್‍ಸ್ತರದಲ್ಲಿ ಕೇಂದ್ರೀಕರಣಗೊಳ್ಳದಂತೆ ನೋಡಿಕೊಳ್ಳುವುದು.
More by ಮದಾನ್, ಅಮನ್
Browse all →More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske