HomeEducation › ಚಿಕ್ಕ ಮಕ್ಕಳು ಬರವಣಿಗೆಯನ್ನು ಕಲಿಯುವುದು

Cover of ಚಿಕ್ಕ ಮಕ್ಕಳು ಬರವಣಿಗೆಯನ್ನು ಕಲಿಯುವುದು

ಚಿಕ್ಕ ಮಕ್ಕಳು ಬರವಣಿಗೆಯನ್ನು ಕಲಿಯುವುದು

ದ್ವಿವೇದಿ, ರಜನಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಬರವಣಿಗೆಯ ಕೌಶಲದ ಅಭಿವೃದ್ಧಿಗೂ ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಇರುವ ಸಂಬಂಧವನ್ನು ಪ್ರಸ್ತುತ ಲೇಖನ ಸೂಕ್ಷ್ಮವಾಗಿ ಅವಲೋಕಿಸುತ್ತದೆ . ಹೇಳಿಕೊಟ್ಟಂತೆ ಬರೆಯಲು ಕಲಿತುಬಿಟ್ಟರೆ ಬರವಣಿಗೆ ಸಿದ್ಧಿಸುವುದೇ? ಪ್ರತಿ ಮಗುವಿಗೂ ಅದರದ್ದೇ ಆದ ಗ್ರಹಣ ಶಕ್ತಿ , ಕಲಿಕೆಯ ವೇಗ ಇರುತ್ತದೆ. ಎಲ್ಲ ಮಕ್ಕಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ಕಲಿಸಲು ಹೋದರೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬೀಳಬಹುದು , ಅದರಿಂದಾಗಿ ಅವರ ಬರವಣಿಗೆಯ ಕೌಶಲದ ಬೆಳವಣಿಗೆ ಸಮರ್ಪಕವಾಗಿ ಆಗದೆ ಹೋಗಬಹುದು ಅಂಬುದನ್ನೇ ಹಲವಾರು ನಿದರ್ಶನಗಳ ಮೂಲಕ ಲೇಖಕರು ಸಾಧಿಸಿ ತೋರಿಸುತ್ತಾರೆ. ಮಕ್ಕಳ ಸಹಜ ಬರವಣಿಗೆಯನ್ನು ಉತ್ತೇಜಿಸುವುದರ ಮೂಲಕ ಅವರ ಚಲನಶೀಲ ಕೌಶಲ , ಮೌಖಿಕ ಅಭಿವ್ಯಕ್ತಿ ಮತ್ತು ಓದುವ ಕೌಶಲ ಕೂಡ ಸಧೃಡಗೊಳ್ಳುತ್ತದೆ . ಬೆಳೆಯುವ ಮಗು ಜಗತ್ತು ತನ್ನದೇ ರೀತಿಯಲ್ಲಿ ಅರ್ಥೈಸಿಕೊಳ್ಳುವ ಪ್ರಕ್ರಿಯೆಯನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕಾದ ಮಹತ್ವವನ್ನು ಈ ಲೇಖನ ವಿವರಿಸುತ್ತದೆ.

More by ದ್ವಿವೇದಿ, ರಜನಿ

Browse all →

More in Education

Browse all →