HomeEducation › ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ

Cover of ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ

ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಈ ಲೇಖನವು ಶಿಕ್ಷಕ ಶಿಕ್ಷಣ ತರಬೇತಿಯ ಅಗತ್ಯತೆ ಮತ್ತು ಮಹತ್ವವನ್ನು ಕುರಿತು ಚಿಂತಿಸುತ್ತದೆ. ಇದರಲ್ಲಿ ಸೇವಾಪೂರ್ವ ಶಿಕ್ಷಕ ಶಿಕ್ಷಣದ ಸ್ಥಿತಿಗತಿಯನ್ನು ಅವಲೋಕಿಸಲಾಗಿದೆ. ಶಿಕ್ಷಕ ಶಿಕ್ಷಣ ಎಂದರೇನು ಎಂಬುದನ್ನು ವ್ಯಾಖ್ಯಾನಿಸಲಾಗಿದೆ. ಶಿಕ್ಷಕ ಶಿಕ್ಷಣ ಸಂಸ್ಥೆಗಳ ಸದ್ಯದ ಪರಿಸ್ಥಿತಿಯನ್ನು, ಹಾಗೂ ವೃತ್ತಿ ಸಂಬಂಧಿ ಅಂಶಗಳನ್ನು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜ್ಞಾನ ಆಯೋಗದ ಸಲಹೆ ಮತ್ತು ಶಿಫಾರಸುಗಳನ್ನು ಕುರಿತು ಚಿಂತಿಸಲಾಗಿದೆ. ಪಿಯುಸಿ ನಂತರ ನಾಲ್ಕು ವರ್ಷಗಳ ಸಮಗ್ರ ಬಿಎಡ್‌ ಕಾರ್ಯಕ್ರಮವನ್ನು ಅಳವಡಿಸಬೇಕಾದ ಅವಶ್ಯಕತೆಯನ್ನು ಮತ್ತು ಶಿಕ್ಷಕ ಶಿಕ್ಷಣದ ಪಠ್ಯಕ್ರಮವನ್ನು ಮರುರೂಪಿಸಬೇಕಾದ ಅಗತ್ಯತೆಯನ್ನು ವಿವರಿಸಲಾಗಿದೆ. ಮೆರಿಟ್‌ ವಿದ್ಯಾರ್ಥಿಗಳನ್ನು ಶಿಕ್ಷಣ ಕ್ಷೇತ್ರದತ್ತ ಆಕರ್ಷಿಸಬೇಕೆಂಬ ಸಲಹೆಯನ್ನು ಈ ಲೇಖನ ನೀಡುತ್ತದೆ. ಶಿಕ್ಷಕ ಶಿಕ್ಷಣ ನೀಡುವವರು ಶಿಕ್ಷಣ ಕ್ಷೇತ್ರಕ್ಕೆ ಮೌಲಿಕ ಕೊಡುಗೆ ನೀಡಬೇಕೆಂದರೆ ಅಗತ್ಯಮಟ್ಟದ ಜ್ಞಾನ, ಮೌಲ್ಯ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ ಎಂಬುದನ್ನು ಈ ಲೇಖನ ಮನಗಾಣಿಸುತ್ತದೆ. ತಮ್ಮ ಅನುಭವದೊಂದಿಗೆ ಪ್ರತಿಯೊಂದನ್ನೂ ಪ್ರಶ್ನಿಸುವ, ತಾವಿರುವ ಸಂದರ್ಭದಲ್ಲಿ ಯಾವ ಕ್ರಮವನ್ನು ಹೇಗೆ ಅನ್ವಯಿಸಿಕೊಳ್ಳಬೇಕೆಂದು ವಿಶ್ಲೇಷಿಸಬಲ್ಲ ಮತ್ತು ಅಗತ್ಯವಿದ್ದಲ್ಲಿ ಪರ್ಯಾಯ ಆಲೋಚನೆಯನ್ನು ಪರಿಕಲ್ಪಿಸುವ ವ್ಯಕ್ತಿತ್ವವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡುತ್ತದೆ. ಈ ಸಂಬಂಧವಾಗಿ ಈವರೆಗಿನ ವಿವಿಧ ರಾಷ್ಟ್ರೀಯ ಆಯೋಗ ಮತ್ತು ನೀತಿಗಳ ಶಿಫಾರಸುಗಳ ಹಾಗೂ ವಿವಿಧ ರಾಷ್ಟ್ರಗಳು ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಗಳ ಒಂದು ಸಮಗ್ರ ಕೋಷ್ಟಕವನ್ನು ನೀಡಲಾಗಿದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →