HomeEducation › ಕಲಿವ ಶಾಲೆಯ ಹಲವು ಮುಖಗಳು

Cover of ಕಲಿವ ಶಾಲೆಯ ಹಲವು ಮುಖಗಳು

ಕಲಿವ ಶಾಲೆಯ ಹಲವು ಮುಖಗಳು

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಶಾಲೆಯನ್ನೇ ಕೇಂದ್ರವಾಗಿಟ್ಟುಕೊಂಡು ಶೈಕ್ಷಣಿಕ ಕ್ಷೇತ್ರದ ಹಲವು ಮಗ್ಗುಲುಗಳನ್ನು ಸ್ಪರ್ಶಿಸುವ ಕೃತಿಯಿದು. ಒಂದು ದಶಕಕ್ಕೂ ಹೆಚ್ಚಿನಕಾಲ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪರಿಣಾಮವಾಗಿ ಈ ಕ್ಷೇತ್ರದ ವಿವಿಧ ಮಜಲುಗಳನ್ನು ಹತ್ತಿರದಿಂದ ನೋಡಿದ ಲೇಖಕರ ಅನುಭವದಿಂದ ರೂಪುತೆಳದ ಈ ಕೃತಿಯು ಅನುಭವಕ್ಕೆ ಸಿಕ್ಕ ಒಳನೋಟಗಳನ್ನು ಪೂರಕ ಪುರಾವೆಗಳೊಂದಿಗೆ ವಿಶ್ಲೇಷಣೆಗೆ ಒಳಪಡಿಸುತ್ತದೆ. ಮೂವತ್ತಾರು ಲೇಖನಗಳನ್ನು ನಾಲ್ಕು ವಿಶಾಲ ವಿಭಾಗದಲ್ಲಿ ಅಂದರೆ, ಶಾಲೆ- ವಿದ್ಯಾರ್ಥಿ- ಕಲಿಕೆ; ಶೈಕ್ಷಣಿಕ ನೀತಿ ಮತ್ತು ಆಡಳಿತ; ಶಿಕ್ಷಕರ ಶಿಕ್ಷಣ ಮತ್ತು ಶೈಕ್ಷಣಿಕ ಅನುವಾದಗಳೆಂದು ವರ್ಗೀಕರಿಸಿ ಪುಸ್ತಕದಲ್ಲಿ ಅಡಕಗೊಳಿಸಲಾಗಿದೆ. ಇಲ್ಲಿನ ಲೇಖನಗಳು ಲೇಖಕರ ಶಾಲಾ ದಿನದ ಅನುಭವದಿಂದ ಆರಂಭಿಸಿ, ಮಕ್ಕಳ ಹಿನ್ನಲೆ, ಅವಕಾಶ ವಂಚಿತ ಮಕ್ಕಳು, ಶಾಲೆಯಲ್ಲಿ ದೈಹಿಕ ಶಿಕ್ಷೆ ಮತ್ತು ಶಿಕ್ಷಣ, ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರಂತಹ ಸಾಹಿತಿಗಳ ಶೈಕ್ಷಣಿಕ ವಿಚಾರಗಳು, ಶಿಕ್ಷಕರ ಶಿಕ್ಷಣ ಮತ್ತು ವೃತ್ತಿಪರತೆ, ಶಿಕ್ಷಣದ ನೀತಿಗಳು, ದೇಶ ವಿದೇಶಗಳ ಶೈಕ್ಷಣಿಕ ವ್ಯವಸ್ಥೆಯ ಸ್ವರೂಪಗಳು ಮತ್ತು ಶೈಕ್ಷಣಿಕ ಅನುವಾದವು ಸೇರಿದಂತೆ ಹಲವು ವಿಷಯಗಳನ್ನು ತನ್ನ ವ್ಯಾಪ್ತಿಯಲ್ಲಿ ಇಟ್ಟುಕೊಂಡಿದೆ. ಲೇಖಕರಿಗೆ ಈ ಕ್ಷೇತ್ರದ ಮೇಲಿರುವ ಕಾಳಜಿ ಮತ್ತು ವಸ್ತುನಿಷ್ಠ ವಿಶ್ಲೇಷಣೆಗಳು ಈ ಪುಸ್ತಕದ ಹಲವು ಲೇಖನಗಳನ್ನು ಒಟ್ಟುಗೊಡಿಸಿ, ಪ್ರತಿ ಲೇಖನಕ್ಕೂ ಇನ್ನೊಂದರೊಂದಿಗೆ ಜೈವಿಕ ಸಂಬಂಧವನ್ನು ಎರ್ಪಡಿಸಿವೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →