HomeEducation › ಭಾಷೆಯ ಲಿಪಿ ಕಲಿಯುವಿಕೆ‌

Cover of ಭಾಷೆಯ ಲಿಪಿ ಕಲಿಯುವಿಕೆ‌

ಭಾಷೆಯ ಲಿಪಿ ಕಲಿಯುವಿಕೆ‌

ಪಿಡಾ, ಅಖಿಲಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು, ಇದರ ಶೀರ್ಷಿಕೆಯೇ ಸೂಚಿಸುವಂತೆ, ಲಿಪಿಯನ್ನು ಕಲಿಸುವ ಕುರಿತದ್ದಾಗಿದೆ. ತರಗತಿಗಳಲ್ಲಿ ಸಾಂಪ್ರದಾಯಿಕವಾಗಿ ತಿದ್ದುವ, ಮತ್ತೆ ಮತ್ತೆ ಬರೆಯುವ, ಉರುಹಾಕುವ ಅಭ್ಯಾಸದ ಮೂಲಕ ಕಲಿಸುವ ಕ್ರಮಕ್ಕಿಂತ ಭಿನ್ನವಾಗಿ ಚಿಕ್ಕ ಮಕ್ಕಳಿಗೆ ಲಿಪಿಗಳನ್ನು ಕಲಿಸುವ ಸಾಧ್ಯತೆಗಳನ್ನು ಇಲ್ಲಿ ಶೋಧಿಸಲಾಗಿದೆ. ಸಾಂಪ್ರದಾಯಿಕ ಅಭ್ಯಾಸ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದಿಲ್ಲ, ಬದಲಾಗಿ ಅಕ್ಷರಾಭ್ಯಾಸದ ಬಗ್ಗೆ ಅವರಲ್ಲಿ ಜಿಗುಪ್ಸೆ ಹುಟ್ಟಿಸುತ್ತದೆ. ಈ ಲೇಖನಗಳಲ್ಲಿ ಸೂಚಿಸಿರುವ ಅಭ್ಯಾಸ ಪ್ರಯೋಗಗಳಾದರೂ ಆಸಕ್ತಿಕರವಾದುದಾಗಿದೆ, ಮಕ್ಕಳು ಉತ್ಸಾಹದಿಂದ ಲಿಪಿ ಕಲಿಕೆಯಲ್ಲಿ ತೊಡಗುತ್ತಾರೆ. ಇಂಗ್ಲೀಷಿಗೆ ಹೋಲಿಸಿದರೆ ಭಾರತೀಯ ಭಾಷೆಯ ಲಿಪಿಗಳು ಜಟಿಲವಾದುದು, ಹೆಚ್ಚು ಸಂಕೀರ್ಣವಾದುದು. ಇದನ್ನು ಗಮನದಲ್ಲಿ ಇರಿಸಿಕೊಂಡು ಶಿಕ್ಷಕರು ಮಕ್ಕಳ ಕಲಿಕೆಯನ್ನು ಸಂಯಮ, ಸಾವಧಾನದಿಂದ ಗಮನಿಸಬೇಕಾಗುತ್ತದೆ. ಪದಗೋಡೆ, ಪದರಚನೆ, ಪದ ಒಗಟು, ಪದ-ಚಿಹ್ನೆ ಸಂಬಂಧ, ಪದ- ಅಂತಾಕ್ಷರಿ ಮುಂತಾದ ಪ್ರಯೋಗಗಳನ್ನು ಇದರಲ್ಲಿ ವಿವರಿಸಲಾಗಿದೆ. ಈ ನಾವೀನ್ಯಪೂರ್ಣ ಪ್ರಯೋಗಗಳ ಮೂಲಕ ಮಕ್ಕಳಿಗೆ ಲಿಪಿಯನ್ನು ಕಲಿಸುವ ಮಾರ್ಗವನ್ನು ಶಿಕ್ಷಕರಿಗೆ ಸೂಚಿಸಲಾಗಿದೆ.

More by ಪಿಡಾ, ಅಖಿಲಾ

Browse all →

More in Education

Browse all →