HomeEducation › ಬೋಧನಾ ಕಲಿಕಾ ಸಾಮಗ್ರಿಗಳ ಸೃಜನಾತ್ಮಕ ಬಳಕೆ

Cover of ಬೋಧನಾ ಕಲಿಕಾ ಸಾಮಗ್ರಿಗಳ ಸೃಜನಾತ್ಮಕ ಬಳಕೆ

ಬೋಧನಾ ಕಲಿಕಾ ಸಾಮಗ್ರಿಗಳ ಸೃಜನಾತ್ಮಕ ಬಳಕೆ

ಮುಕುಂದ, ಕಮಲಾ ವಿ.

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು, ಮಕ್ಕಳು ಶಾಲಾ ಕೊಠಡಿಯೊಳಗೆ ಬಂಧಿಗಳಾಗಿ ಕಲಿಯುವುದಕ್ಕಿಂತ ಹೊರಗಿನ ಮುಕ್ತ ವಾತಾವರಣದಲ್ಲಿ ಕಲಿಯುವುದೇ ಸ್ವಾಭಾವಿಕ ಎನ್ನುತ್ತದೆ. ಶಾಲೆಗಳಲ್ಲಿ ಕುಳಿತು ಮಕ್ಕಳು ಕರಿಹಲಗೆಯಲ್ಲೋ, ಭಿತ್ತಿಪತ್ರಗಳಲ್ಲೋ, ಪಠ್ಯಪುಸ್ತಕಗಳಲ್ಲೋ ಇರುವಷ್ಟನ್ನು ಕೇಳಿಸಿಕೊಂಡು ಅರ್ಥೈಸಿಕೊಳ್ಳಬೇಕು ಎಂದು ನಿರೀಕ್ಷಿಸುವುದು ಫಲಪ್ರದ ಕಲಿಕೆಯಾಗುವುದಿಲ್ಲ. ಅಲ್ಲಿ ಯಾವುದೇ ರೀತಿಯ ಮೂರ್ತ ಅನುಭವ ಉಂಟಾಗುವುದಿಲ್ಲ. ಅಷ್ಟೇ ಅಲ್ಲ, ಅಲ್ಲಿ ಹೆಚ್ಚಿನ ಸಮಯ ಮಕ್ಕಳು ಮೌನವಾಗಿರಬೇಕು ಎಂದಷ್ಟೇ ಬಯಸಲಾಗುತ್ತದೆ. ಕಲಿಯುವ ಮನಸ್ಸುಗಳಿಗೆ ಸಾಮಾನ್ಯವಾಗಿ ಮುಕ್ತವಾಗಿರಬೇಕಾಗಿದ್ದ ಮಾರ್ಗಗಳನ್ನು ನಿರ್ಬಂಧಿಸಲಾಗಿರುತ್ತದೆ. ತಮ್ಮ ಪರಿಸರದಿಂದ ಕಲಿಯುವುದು ಪ್ರತಿಯೊಬ್ಬರ ಬಾಲ್ಯದ ಅವಿಭಾಜ್ಯ ಅಂಗ. ಅಂತಹ ಕಲಿಕಾ ಪರಿಸರವನ್ನು ಒದಗಿಸುವುದು ಬೋಧನಾ ವಿಧಾನವನ್ನು ವಿನ್ಯಾಸ ಮಾಡುವವರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ನಮ್ಮ ತರಗತಿಗಳ ಸಾಂಪ್ರದಾಯಿಕ ಕ್ರಮವನ್ನು ಬದಲಾಯಿಸಬೇಕು, ಆ ಮೂಲಕ ಮಕ್ಕಳ ಕಲಿಕೆ ಮತ್ತು ಸಮಗ್ರ ಬೆಳವಣಿಗೆಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕು ಎನ್ನುತ್ತಾರೆ ಲೇಖಕಿ.

More by ಮುಕುಂದ, ಕಮಲಾ ವಿ.

Browse all →

More in Education

Browse all →