Home › Education › ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

Cover of ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy $1
About this book
ತಮ್ಮ ಅನಾರೋಗ್ಯವನ್ನು ಕೂಡ ಲೆಕ್ಕಿಸದೆ ಕೇವಲ ಮಕ್ಕಳ ಬಗ್ಗೆಯೇ ಚಿಂತಿಸುತ್ತಾ ಅವರ ಏಳಿಗೆಗೆ ಶ್ರಮಿಸುತ್ತಾ ಇರುವ ಶ್ರೀ ರಮೇಶ್ ಚಂದ್ರ ಪಾಲ್ ಅವರ ಸಾಧನೆಯ ಬಗ್ಗೆ ಈ ಲೇಖನ ಚಿತ್ರಿಸುತ್ತದೆ. ಅಕ್ಷರ ಜ್ಞಾನವಿಲ್ಲದ ಸಮುದಾಯಕ್ಕೆ ಸೇರಿದ ಈ ಶಾಲೆಯ ಮಕ್ಕಳು ಉತ್ಸಾಹದಿಂದ ಕಲಿಯಲು ರಮೇಶ್ ಚಂದ್ರ ಪಾಲ್ ಅವರ ಪರಿಶ್ರಮವೇ ಕಾರಣ. ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೀಠನ್ ನ ಸರ್ಕಾರೀ ಉತ್ಕೃಷ್ಟ ಹಿರಿಯ ಪ್ರಾಥಮಿಕ ಶಾಲೆಗೆ ಇವರು ಮೊದಲಿಗೆ ಬಂದು ಸೇರಿಕೊಂಡಾಗ ಬಹಳ ಸಮಸ್ಯೆಗಳನ್ನೆದುರಿಸಬೇಕಾಯಿತು. ಮಾಡಿದ ಪಾಠವನ್ನು ಅರ್ಥ ಮಾಡಿಕೊಳ್ಳಲೂ ಆಗದ ಪರಿಸ್ಥಿತಿಯಲ್ಲಿ ಮಕ್ಕಳಿದ್ದರು. ಅವರ ಅನಾರೋಗ್ಯವೂ ಜೊತೆಗೆ ಸೇರಿಕೊಂಡಿತ್ತು. ಇದ್ಯಾವುದನ್ನೂ ಲೆಕ್ಕಿಸದೆ, ಪಾಠಗಳನ್ನು ಮುಗಿಸಿಬಿಟ್ಟರೆ ಆಗದು, ಮಕ್ಕಳಿಗೆ ಮೂಲಭೂತ ಪರಿಕಲ್ಪನೆಗಳು ಅರ್ಥವಾಗಬೇಕು ಎಂದು ನಿರ್ಧರಿಸಿದ ರಮೇಶ್ ಚಂದ್ರ ಅವರು ಅದರಂತೆಯೇ ನಡೆದುಕೊಂಡು ಮಕ್ಕಳ ಕಲಿಕೆಯ ಗುಣಮಟ್ಟ, ಹಾಜರಿ ಸಂಖ್ಯೆ ಎರಡನ್ನೂ ಹೆಚ್ಚಿಸಲು ಕಾರಣವಾದರು. ಈ ಲೇಖನ ಅವರ ವಿಭಿನ್ನ ಬೋಧನಾ ಶೈಲಿ, ಮೂಲಭೂತ ಪರಿಕಲ್ಪನೆಗಳನ್ನು ಬೋಧಿಸಲು ಅವರು ಕೊಡುವ ಪ್ರಾಮುಖ್ಯತೆ ಹಾಗೂ ಶಾಲೆಯ ಒಳಿತಿಗಾಗಿ ಅವರು ಪಡುತ್ತಿರುವ ಸತತ ಪರಿಶ್ರಮದ ಬಗ್ಗೆ ವಿವರಿಸುತ್ತದೆ.

More by ಗಿರಿಧರ್, ಎಸ್.

Browse all →

More in Education

Browse all →